ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 15 :
ಶಾಸಕ ಯತ್ನಾಳರಿಗೆ ಬಿಜೆಪಿ ವ್ಯಾಮೋಹ ಹೋಗಿಲ್ಲ. ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳಲು ಈ ರೀತಿ ಹೊಸ ಪಕ್ಷದ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಅವರು ಹೊಸ ಪಕ್ಷ ಕಟ್ಟುವುದೇ ಇಲ್ಲ ಬಿಡಿ ಎಂದು ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ ಅವರು ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳಲು ಈ ಪ್ರಯತ್ನ ಅಲ್ಲ. ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಬೇಕಾದರೆ ಯತ್ನಾಳರು ಪಕ್ಷ ಕಟ್ಟಲಿ ಅದಕ್ಕೆ ಶುಭವಾಗಲಿ. ಅವರು ತಮಿಳುನಾಡಿನ ವಿಜಯ್ ಅವರಂತೆ ಮುಖ್ಯಮಂತ್ರಿಯೂ ಆಗಲಿ ನಾನೇ ಸಪೋರ್ಟ್ ಮಾಡುವೆ ಎಂದು ಎಂ. ಬಿ. ಪಾಟೀಲ ವ್ಯಂಗವಾಡಿದರು.
ಯತ್ನಾಳ ಅವರು ಕೂಡ ಟೋಪಿ, ನಮಾಜ್, ಟಿಪ್ಪು ಸುಲ್ತಾನ ಜಯಂತಿ ಎಲ್ಲ ಮಾಡೇ ಬಿಟ್ಟಿದ್ದಾರೆ. ಯತ್ನಾಳರಿಗೆ ಇವರಿಗೆ ತಾಕತ್ ದಮ್ ಇದ್ರೆ ಜೆಸಿಬಿ ಹೊಸ ಪಕ್ಷ ಮಾಡಲಿ ಇವರು ಮುಖ್ಯಮಂತ್ರಿ ಆಗಲಿ ಎಂದರು. ಯತ್ನಾಳ ಹೊಸ ಪಕ್ಷ ಕಟ್ಟೋದಿಲ್ಲ. ವಿಜಯಪುರ ಬಿಜೆಪಿ ಟಿಕೆಟ್ಗಾಗಿ ಬ್ಲಾಕ್ಮೇಲ್ ಮಾಡುತ್ತಿದ್ದಾರೆ. ಟಿಕೆಟ್ ನೀಡುವಂತೆ ನಾಟಕ ಮಾಡುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದೆ. ನಾವು ಲಿಂಗ ಧರಿಸುತ್ತೇವೆ. ಸಿಖ್ ಬಾಂಧವರು ಪೇಟಾ ಹಾಕುತ್ತಾರೆ. ಹೀಗಾಗಿ ಎಲ್ಲರಿಗೂ ಅನುಮತಿ ನೀಡಲಾಗಿದೆ. ಅದರಲ್ಲೇನೂ ವಿಶೇಷವಿಲ್ಲ. ನಾವು ಸಮಗ್ರ ಚಿಂತನೆಯುಳ್ಳ ಸರ್ಕಾರ ನಡೆಸುತ್ತಿದ್ದೇವೆ. ಎಲ್ಲ ಜಾತಿ ಮತ್ತು ಧರ್ಮಗಳ ಅವರವರ ಆಚರಣೆಗೆ ಗೌರವ ಕೊಡುತ್ತೇವೆ. ಜನರು ಜನಿವಾರ ಧರಿಸುವುದು, ಲಿಂಗ ಧರಿಸುವುದು ಅಥವಾ ಸಿಖ್ಖರು ಪೇಟ ಧರಿಸುವುದು ಅವರವರ ಧಾರ್ಮಿಕ ಹಕ್ಕು. ಅದನ್ನು ನಾವು ಬೆಂಬಲಿಸುತ್ತೇವೆ.
ದೇವಸ್ಥಾನ ಅಥವಾ ಮಠಗಳ ಮೇಲೆ ಕೇಸರಿ ಧ್ವಜ ಇರುವುದು ಸಹಜ. ಆದರೆ ಈ ಹಿಂದೆ ಶಾಲಾ ಮಕ್ಕಳು ಕೇಸರಿ ಶಾಲು ಧರಿಸುತ್ತಿದ್ದರಾ? ಎಂದು ಪ್ರಶ್ನಿಸಿದರು. ವಿಭೂತಿ ಕುಂಕಮ ಹಚ್ಚಿಕೊಂಡು ಶಾಲೆಗೆ ಹೋಗಬಹುದು. ಕುಂಕುಮ ವಿಭೂತಿ ನಾಮ ಹಚ್ಚಿಕೊಂಡು ಹೋಗ್ತಿದ್ರು ಅದಕ್ಕೆ ಯಾರು ಬೇಡಾ ಅನ್ನುತ್ತಾರೆ. ಜನಿವಾರ ಇಷ್ಟಲಿಂಗ ಹಾಕಿಕೊಂಡಿರುತ್ತಾರೆ. ಅದಕ್ಕೆ ಯಾರು ಬೇಡಾ ಎನ್ನುತ್ತಾರೆ ಎಂದರು.
ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ವಿಭೂತಿ, ಕುಂಕುಮ ಅಥವಾ ನಾಮ ಇಟ್ಟುಕೊಂಡು ಬರುವುದರಲ್ಲಿ ಯಾವುದೇ ತಪ್ಪಿಲ್ಲ. ಮತ್ತು ಅದಕ್ಕೆ ಯಾರೂ ಅಡ್ಡಿಪಡಿಸುವುದಿಲ್ಲ ಎಂದ ಸಚಿವ ಎಂ ಬಿ ಪಾಟೀಲ ಹೇಳಿದರು.
ಮೊದಲು ತಮಟೆ ಹೊಡೆಯಿರಿ ಎಂದರು…ಈಗ ಗಾಡಿ ಬಿಡಿ ಎನ್ನುತ್ತಿದ್ದಾರೆ…ಮೊದಲು ತಮಟೆ ಹೊಡೆಯಿರಿ ಎಂದು ಸಲಹೆ ನೀಡಿದ್ದ ಪ್ರಧಾನಿಗಳು ಈಗ ಗಾಡಿ ಬಿಡಿ ಎನ್ನುತ್ತಿದ್ದಾರೆ. ನರೇಂದ್ರ ಮೋದಿಯವರ ಅಚ್ಚೆ ದಿನದಲ್ಲಿ ಏನೆಲ್ಲಾ ಆಗಬೇಕು ಎಲ್ಲವೂ ಆಗುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ ಲೇವಡಿ ಮಾಡಿದರು.
ಆದರೂ ಮೋದಿಯ ಸದ್ಭಕ್ತರು ಇನ್ನೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಬಂಗಾರ ಖರೀದಿ ಮಾಡಬೇಡಾ ಅಂತಾರೆ. ಕೋವಿಡ್ ಸಂದರ್ಭದಲ್ಲಿ ತಮಟೆ ಹೊಡೆಯಿರಿ ಅಂತಾರೆ. ಈಗ ಸೈಕಲ್ ಮೇಲೆ ಹೋಗಿ ಗಾಡಿ ಬಿಡಿ ಅಂತಾರೆ. ಮನಮೋಹಕ ಸಿಂಗ್ ಅವರು ಇದ್ದಾಗ ಅರ್ಥ ವ್ಯವಸ್ಥೆ ಏನಿತ್ತು. ಹಿಂದೆ ಪೆಟ್ರೋಲ್ ಡಿಸೇಲ್ ಕುರಿತಾಗಿ ಏನೆಲ್ಲ ಮಾತನಾಡಿದ್ದಾರೆ. ನೀವೇ ನೋಡಿ ಎಂದರು.
ಬೆಂಗಾವಲು ವಾಹನ ಕಡಿತಗೊಳಿಸಿ ಎಂಬ ಮೋದಿ ಹೇಳಿಕೆ ವಿಚಾರ ನಾನು ಕೂಡಾ ಒಂದು ಬೆಂಗಾವಲು ವಾಹನ ಬಿಟ್ಟಿದ್ದೀನಿ. ಅದು ಮಾತು ಬೇರೆ. ಸುಮ್ಮನೆ ಇವೆಲ್ಲ ನಾಟಕೀಯ ಕರೋನಾ ಬಂದಾಗ ಸೈಂಟಿಫಿಕ್ ಆಗಿ ಔಷಧಿ ಕೊಡಬೇಕು. ತಮಟೆ ಹೊಡೆದರೆ ಕೊರೊನಾ ಹೋಗೋತ್ತಾ ಎಂದು ಪ್ರಶ್ನಿಸಿದರು.
ಮೋದಿ ಅವರು ಹಿಂದೆ ಏನು ಮಾತನಾಡಿದ್ದರು. ದೇಶದ ಜನತೆಗೆ ಮರಳು ಮಾಡಿದರು. ದೇಶ ಅಧೋಗತಿಗೆ ಇಳಿದಿದೆ. ದೇಶ ನಾಶ ಮಾಡಿದ್ದಾರೆ ಎಂದರು.
ಟಿಕೆಟ್ ಗಿಟ್ಟಿಸಿಕೊಳ್ಳಲು ಯತ್ನಾಳ ಹೊಸ ಪಕ್ಷದ ಬ್ಲಾಕ್ ಮೇಲ್: ಯತ್ನಾಳಗೆ ಸಚಿವ ಎಂಬಿಪಿ ಟಾಂಗ್


