ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 25:
ಯುವಕನೋರ್ವ ರೈಲು ಹಳಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂಡಿ ನಗರದ ರೈಲು ನಿಲ್ದಾಣ ಹತ್ತಿರ ಶನಿವಾರ ರಾತ್ರಿ ನಡೆದಿದೆ.
ಮೃತ ಯುವಕನನ್ನು ಇಂಡಿ ತಾಲೂಕಿನ ಸಾತಲಗಾಂವ ಪಿ ಐ ಗ್ರಾಮದ ವಿಜಯ ಮಲ್ಲಿಕಾರ್ಜುನ ಮಡಗೊಂಡ (24) ಎಂದು ಗುರುತಿಸಲಾಗಿದೆ.
ಶನಿವಾರ ರಾತ್ರಿ 2 ಗಂಟೆಗೆ ಸೊಲ್ಲಾಪುರ ಹುಬ್ಬಳ್ಳಿ ರೈಲು (56903 ) ಸಂಚರಿಸುವಾಗ ಎರಡೂ ಹಳಿಗಳ ನಡುವೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ರೈಲ್ವೆ ಪೊಲೀಸರ ಮಾಹಿತಿಯ ಪ್ರಕಾರ ಯುವಕ ತನ್ನ ಕಾರನ್ನು ರೈಲು ಟ್ರ್ಯಾಕಿನ ಹತ್ತಿರ ನಿಲ್ಲಿಸಿ ಮೊದಲು ಸಮೀಪದ ಒಂದು ಮರಕ್ಕೆ ನೇಣು ಹಾಕಿಕೊಳ್ಳಲು ಮುಂದಾಗಿ ನೇಣು ಹಾಕಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಬರುತ್ತಿರುವ ರೈಲು ನೋಡಿ ಹಳಿಗಳ ನಡುವೆ ಬಿದ್ದಿದ್ದಾನೆ. ಟ್ರೈನ್ ಚಾಲಕ ಆತ ಬಿದ್ದಿರುವುದನ್ನು ಗಮನಿಸಿ ಬ್ರೇಕ್ ಹಾಕಿದ್ದು ಅಷ್ಟರಲ್ಲಿ ರೈಲು ಆತನ ಮೇಲೆ ಹರಿದಿತ್ತು ಎಂದು ತಿಳಿಸಿದ್ದಾರೆ.
ಮೃತ ಯುವಕ ಪುಣೆಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ತನ್ನ ಕಾರ್ ಬಿಟ್ಟು ಅಲ್ಲಿಯೇ ವಾಸವಾಗಿದ್ದ. ಇಲ್ಲಿ ನಮಗೆ ಸಮರ್ಪಕ ಸಂಬಳ ಸಿಗುತ್ತಿಲ್ಲ. ಇಲ್ಲಿನ ಸಂಬಳ ಸಾಕಾಗುತ್ತಿಲ್ಲ. ನಾನು ಸಹ ಊರಿಗೆ ಬರುತ್ತೇನೆ ಎಂದು ಸಂಬಂಧಿಕರಿಗೆ ದೂರವಾಣಿಯಲ್ಲಿ ಮಾತನಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ವಿಜಯಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರೈಲು ಹಳಿಗೆ ಬಿದ್ದು ಯುವಕ ಆತ್ಮಹತ್ಯೆ


