ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 15:
ಈಜಲು ತೆರಳಿದ್ದ ಯುವಕ ನೀರು ಪಾಲಾಗಿರುವ ಘಟನೆ
ಇಂಡಿ ತಾಲೂಕಿನ ಪಡನೂರು ಬಳಿಯ ಭೀಮಾನದಿಯಲ್ಲಿ ಭಾನುವಾರ ನಡೆದಿದೆ.
ಪಡನೂರು ಗ್ರಾಮದ ಅನೀಲಕುಮಾರ ಪೂಜಾರಿ ನೀರು ಪಾಲಾದ ಯುವಕ.
ಇಂದು ಬೆಳಿಗ್ಗೆ ನದಿಯಲ್ಲಿ ಈಜಲು ತೆರಳಿದ್ದ ಯುವಕ ಪೂಜಾರಿ ನೀರಲ್ಲಿ ನಾಪತ್ತೆಯಾಗಿದ್ದಾನೆ.
ಅನೀಕುಮಾರನಿಗಾಗಿ ಗ್ರಾಮಸ್ಥರಿಂದ ಶೋಧ ಕಾರ್ಯ ಕೈಗೊಂಡಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ
ಮೋಟರ್ ಬೋಟ್ ಮೂಲಕ ಅನೀಲಕುಮಾರನಿಗಾಗಿ ಶೋಧನೆ ಕಾರ್ಯ ಕೈಗೊಂಡಿದ್ದಾರೆ.
ಅನೀಲಕುಮಾರ ಇನ್ನೂ ಪತ್ತೆಯಾಗಿಲ್ಲ.
ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಭೀಮಾನದಿಯಲ್ಲಿ ಯುವಕ ನೀರು ಪಾಲು


