ಸಪ್ತಸಾಗರ ವಾರ್ತೆ ವಿಜಯಪುರ, ಸೆ. 24 ಅಕಾಲಿಕವಾಗಿ ನಿಧನರಾದ ಸಾಹಿತ್ಯದ ಮೇರು ದಿಗ್ಗಜ ದಿ.ಎಸ್.ಎಲ್. ಭೈರಪ್ಪ ಅವರಿಗೆ ಯುವ ಭಾರತ ಸಂಸ್ಥೆ ವತಿಯಿಂದ ಸಿದ್ಧೇಶ್ವರ ದೇವಸ್ಥಾನದ ಹತ್ತಿರ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ನುಡಿನಮನ ಅರ್ಪಿಸಲಾಯಿತು.
ನುಡಿನಮನ ಅರ್ಪಿಸಿದ ಯುವ ಭಾರತ ಸಂಸ್ಥಾಪಕ ಉಮೇಶ ಕಾರಜೋಳ ಮಾತನಾಡಿ, ಕನ್ನಡ ಸಾರಸ್ವತ ಲೋಕದ ಮಹಾನ್ ದಿಗ್ಗಜ ಡಾ.ಎಸ್.ಎಲ್. ಭೈರಪ್ಪ ಅವರ ಅಕಾಲಿಕ ನಿಧನದಿಂದ ನಾವು ಒಬ್ಬ ಶ್ರೇಷ್ಠ ಚಿಂತಕ, ಸಾಹಿತಿಯನ್ನು ಕಳೆದುಕೊಂಡಿದ್ದೇವೆ,ಅವರ ಅನೇಕ ಕಾದಂಬರಿಗಳು ಬೇರೆ ಬೇರೆ ಭಾಷೆಗೆ ಅನುವಾದಗೊಂಡಿವೆ. ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ, ಭಾರತೀಯ ಸಂಸ್ಕೃತಿಯ ಮಹತ್ವದ ಪ್ರತಿಪಾದಕರಾಗಿದ್ದ ಅವರು ಸತ್ಯವನ್ನು ಸಾಹಿತ್ಯದ ಮೂಲಕ ಬಿತ್ತರಿಸಿದವರು, ಗೃಹಭಂಗ, ಆವರಣ, ಅನ್ವೇಷಣ ಹೀಗೆ ಅನೇಕ ಕೊಡುಗೆಗಳನ್ನು ನಾಡಿಗೆ ಅರ್ಪಿಸಿದ್ದ ಡಾ.ಎಸ್.ಎಲ್. ಭೈರಪ್ಪ ಅವರು ತಮ್ಮ ಸಾಹಿತ್ಯ ಸೇವೆ ಹಾಗೂ ಕೊಡುಗೆಯ ಮೂಲಕ ಕನ್ನಡನಾಡಿನ ಜನತೆಯ ಹೃದಯ ಮಂದಿರದಲ್ಲಿ ಶಾಶ್ವತವಾದ ಸ್ಥಾನ ಪಡೆದುಕೊಂಡಿದ್ದಾರೆ ಎಂದರು.
ಪದ್ಮಶ್ರೀ, ಸರಸ್ವತಿ ಸಮ್ಮಾನ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರರಾಗಿದ್ದ ಅವರು ಸಾರಸ್ವತ ಸರಸ್ವತಿಯ ದಿವ್ಯ ವರಪುತ್ರ ಎಂದು ಕಾರಜೋಳ ಕಂಬನಿ ಮಿಡಿದರು.ಗುಜರಾತ್ ಸೇರಿದಂತೆ ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಅನುಪಮ ಸೇವೆ ಸಲ್ಲಿಸಿದ ಶ್ರೇಯಸ್ಸು ಅವರಿಗೆ ಇದೆ ಎಂದರು. ಈ ಸಂದರ್ಬದಲ್ಲಿ ಜಿಲ್ಲಾ ಯುವ ಪರಿಷತ ಅಧ್ಯಕ್ಷ ಶರಣು ಸಬರದ ಮಾತನಾಡಿ ಪದ್ಮಭೂಷಣ ಎಸ್ ಎಲ್ ಭೈರಪ್ಪನವರ ಇಂದು ಅವರನ್ನಗಲಿ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ ಅವರು ರಚಿಸಿದ ಕಾದಂಬರಿಗಳು ಹಲವಾರು ಭಾಷೆಗಳಲ್ಲಿ ಅನುವಾದ ಗೊಂಡಿದ್ದು ಕೆಲವು ಕಾದಂಬರಿಗಳು ಕನ್ನಡ ಚಲನಚಿತ್ರವಾಗಿ ಹೊರಹೊಮ್ಮಿವೆ ಇನ್ನು ಕೆಲವು ಕಾದಂಬರಿಗಳು ನಾಟಕ ಧಾರಾವಾಹಿ ಗಳಲ್ಲಿ ಪ್ರಸಾರಗೊಂಡಿವೆ ಮತ್ತು ಅವರು ಸಾಕಷ್ಟು ಸಾಹಿತಿಗಳಿಗೆ ಮಾದರಿಯಾಗಿ ಬರಹಗಾರಿಗೆ ಭೀಮ ಕಾಯಕನಾಗಿ ಕಾರ್ಯನಿರ್ವಹಿಸಿದ್ದು ಅವರ ಸರಳ ವ್ಯಕ್ತಿತ್ವ ಅವರನ್ನು ಮತ್ತಷ್ಟು ಎತ್ತರಕ್ಕೆ ಸಾಹಿತ್ಯ ಲೋಕ ಕೊಂಡುವೈದಿದೆ ವಿಶೇಷ ಪರ್ವ ಕಾದಂಬರಿ ನಾಟಕ ರೂಪದಲ್ಲಿ ಹಲವಾರು ರಾಜ್ಯಗಳಲ್ಲಿ ಜಿಲ್ಲೆಗಳಲ್ಲಿ ಪ್ರದರ್ಶನಗೊಂಡು ಯಶಸ್ವಿಯಾಗಿ ವಿಶೇಷವಾಗಿ ನಮ್ಮ ವಿಜಯಪುರದಲ್ಲಿ ಕೂಡ ಬರುವ ನಾಟಕ ಪ್ರದರ್ಶನಗೊಂಡಿದ್ದು ಅದರ ನಿರ್ದೇಶಕರಾಗಿ ಅಡ್ಡಂಡ ಕಾರ್ಯಪ್ಪ ಮತ್ತು ನಾನು ಜಿಲ್ಲೆಯಲ್ಲಿ ಪ್ರದರ್ಶನ ಮಾಡಿದ್ದು ಅಚ್ಚಳಿಯಾಗಿ ಉಳಿದಿದೆ ಎಂದರು.
ಈ ಸಂದರ್ಭದಲ್ಲಿ ಎಸ್.ಬಿ ವಿಸ್ಡಮ್ ಅಕಾಡೆಮಿಯ ಪ್ರಭುಗೌಡ ಬೋನಾಳ, ಪ್ರಭುಗೌಡ ಚಿಕ್ಕನಳ್ಳಿ, ಶ್ರೀ ಗಣೇಶ ಕುರನಳ್ಳಿ ವಿನೋದಕುಮಾರ ಮಣೂರ, ಬಸವರಾಜ ಕರಿಕಬ್ಬಿ, ಪ್ರಹಲ್ಲಾದ ಇಂಗಳಗಿ ಹಾಗೂ ಅನೇಕ ಕಾರ್ಯಕರ್ತರಿದ್ದರು.
ಸಾಹಿತಿ ಭೈರಪ್ಪ ನಿಧನಕ್ಕೆ ಯುವ ಭಾರತ ಸಂಸ್ಥೆ ಶ್ರದ್ಧಾಂಜಲಿ, ನುಡಿನಮನ
